Important updates for Assistant Professor exam

Important updates for Assistant Professor exam

 ಮೇ 2 ರಿಂದ ಮೇ 17ರವರೆಗೂ ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾದ ಯುಜಿಸಿ ನೆಟ್ ಪರೀಕ್ಷೆ ಕೋವಿಡ್-19 ಸಾಂಕ್ರಾಮಿಕದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಭ್ಯರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಯ ಸುರಕ್ಷತೆ ಮತ್ತು ಹಿತವನ್ನು ಪರಿಗಣಿಸಿ ಯುಜಿಸಿ ನೆಟ್ ಡಿಸೆಂಬರ್ 2020 ಸೈಕಲ್ (ಮೇ 2021) ಪರೀಕ್ಷೆಯನ್ನು ಮುಂದೂಡಲಾಗಿತ್ತು.


ಆದರೆ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾದ ಯುಜಿಸಿ ನೆಟ್ 2021 ಸೆಪ್ಟೆಂಬರ್ ಮೊದಲನೇ ವಾರದಲ್ಲಿ ನಡೆಯಲಿದೆ ಎಂದು ಮಾಹಿತಿ ದೊರಕಿದೆ. ಪರೀಕ್ಷೆಗೆ 15 ದಿನಗಳು ಬಾಕಿಯಿರುವ ಹಾಗೆ ಅಧೀಕೃತ ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.


ಕರ್ನಾಟಕದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತುಂಬಲು ವಿವಿಧ ವಿಷಯಗಳಲ್ಲಿನ ಪಠ್ಯಕ್ರಮ ನಿಗದಿಪಡಿಸಲು ಸಮಿತಿಯ ರಚನೆಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದ್ದು ಕೂಡಲೆ ಹೊಸ ಸಚಿವ ಸಂಪುಟ ರಚನೆಯ ಹೊತ್ತಲ್ಲೆ ಸಹಾಯಕ ಪ್ರಾಧ್ಯಾಪಕರ ಮುಖ್ಯ ಪರೀಕ್ಷೆಯ ಅಧಿಕೃತ ಅಧಿಸೂಚನೆಯು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Post a Comment

0 Comments