Assistant professor recruitment notification 2021
ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ( Government First Grade College ) ಖಾಲಿ ಇರುವಂತ ಸಹಾಯಕ ಪ್ರಾಧ್ಯಾಪಕರ ( Assistant Professor ) 1,242 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆ ( ಕಾಲೇಜು ಶಿಕ್ಷಣ ) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ಹರ್ಷ ಅಧಿಸೂಚನೆ ಹೊರಡಿಸಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಮಾಡುವ ಸಂಬಂಧ 2015ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ( Assistant Professor Recruitment ) ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ ಭರ್ತಿಯಾಗದಿರುವ 145 ಹುದ್ದೆಗಳನ್ನೊಳಗೊಂಡಂತೆ ಪ್ರಸ್ತುತ ಭರ್ತಿ ಮಾಡಬೇಕಾಗಿರುವ 1097 ಹುದ್ದೆಗಳು ಸೇರಿದಂತೆ ಒಟ್ಟು 1242 ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ( Assistant Professor Job ) ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಅದರಂತೆ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡುವ ಸಲುವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವನ್ನಾಗಿ ಆಯ್ಕೆ ಮಾಡಿ ಅಧಿಸೂಚಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ.57,700 ರಿಂದ 1,82,400ಯಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದೆ.
ಹೀಗಿದೆ ವಿಷಯವಾರು ಮತ್ತು ವೃಂದವಾರು ಹುದ್ದೆಗಳ ವಿವರ
2015ರ ನೇಮಕಾತಿ ಭರ್ತಿಯಾಗದ ಹುದ್ದೆಗಳ ವಿವರ
ಕನ್ನಡ 02
ಇಂಗ್ಲೀಷ್ - 50
ಹಿಂದಿ - 01
ಉರ್ದು - 06
ಇತಿಹಾಸ - 01
ಅರ್ಥಶಾಸ್ತ್ರ - 01
ರಾಜ್ಯ ಶಾಸ್ತ್ರ - 02
ಸಮಾಜ ಶಾಸ್ತ್ರ - 01
ಸಮಾಜಕಾರ್ಯ - 01
ವಾಣಿಜ್ಯಶಾಸ್ತ್ರ - 27
ನಿರ್ವಹಣಾಶಾಸ್ತ್ರ - 14
ಭೌತಿಶಾಸ್ತ್ರ - 02
ರಾಸಾಯನಶಾಸ್ತ್ರ - 03
ಗಣಿತ ಶಾಸ್ತ್ರ - 03
ಗಣಕ ವಿಜ್ಞಾನ - 28
ಫ್ಯಾಷನ್ ಟೆಕ್ನಾಲಜಿ - 03 ಸೇರಿದಂತೆ ಒಟ್ಟು 145 ಹುದ್ದೆಗಳು
ಪ್ರಸ್ತುತ ನೇಮಕಾತಿಯಲ್ಲಿ ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ವಿವರ
ಕನ್ನಡ - 105
ಇಂಗ್ಲೀಷ್ - 34
ಹಿಂದಿ - 09
ಉರ್ದು - 03
ಇತಿಹಾಸ - 108
ಅರ್ಥಶಾಸ್ತ್ರ - 121
ರಾಜ್ಯಶಾಸ್ತ್ರ - 96
ಸಮಾಜಶಾಸ್ತ್ರ - 48
ಶಿಕ್ಷಣ ಶಾಸ್ತ್ರ - 02
ಕಾನೂನು - 17
ಸಮಾಜಕಾರ್ಯ - 04
ಭೂಗೋಳಶಾಸ್ತ್ರ - 08
ಭೂಗರ್ಭಶಾಸ್ತ್ರ - 05
ವಾಣಿಜ್ಯ ಶಾಸ್ತ್ರ - 171
ನಿರ್ವಹಣಾಶಾಸ್ತ್ರ - 01
ಭೌತಶಾಸ್ತ್ರ - 74
ರಾಸಾಯನಶಾಸ್ತ್ರ - 82
ಜೈವಿಕ ರಸಾಯನಶಾಸ್ತ್ರ - 05
ಗಣಿತಶಾಸ್ತ್ರ - 72
ಸೂಕ್ಷ್ಮಜೀವಶಾಸ್ತ್ರ - 05
ಪ್ರಾಣಿಶಾಸ್ತ್ರ - 31
ಸಸ್ಯಶಾಸ್ತ್ರ - 51
ಎಲೆಕ್ಟ್ರಾನಿಕ್ಸ್ - 04
ಗಣಕವಿಜ್ಞಾನ - 35
ಸಂಖ್ಯಾಶಾಸ್ತ್ರ - 06 ಸೇರಿದಂತೆ ಒಟ್ಟು 1097 ಹುದ್ದೆಗಳು
ಈ ಮೇಲಿನ ವಿಷಯವಾರು ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ.95ರಷ್ಟು ನೇರನೇಮಕಾತಿ ಮೂಲಕ ಹಾಗೂ ಶೇ.5ರಷ್ಟು ಇಲಾಖೆಯ ಗ್ರೂಪ್ ಸಿ ವೃಂದದಿಂದ ನೇರನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ವಿಶೇಷ ನೇಮಕಾತಿ ನಿಯಮಗಳ ಅನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದ್ದಾರೆ. ಇಂತಹ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸದ್ಯದಲ್ಲೇ ಅರ್ಜಿಯನ್ನು ಆಹ್ವಾನಿಸಲಿದೆ.
0 Comments