Important information of two wheeler RC insurance and driving licence

Important information of two wheeler RC insurance and driving licence

 

        ಪೊಲೀಸರು ನಿಮ್ಮ ವಾಹನ ಚೆಕ್ ಮಾಡಿದಾಗ ಇನ್ನೋರ್ವ ಪೊಲೀಸರಿಗೆ ಹೇಳಿ ಬಿಡಿಸಿಕೊಳ್ಳುವ ಪ್ರಯತ್ನ ಮಾಡದೇ, ನಿಮ್ಮ ವಾಹನದ RC, Insurance, PUC ಹಾಗೂ ನಿಮ್ಮ Driving Licence, Helmet ಇದ್ದರೆ ಮಾತ್ರ ನಮ್ಮ ಸಹಕಾರ ಪಡೆದುಕೊಳ್ಳಿ, ಆ ಕ್ಷಣಕ್ಕೆ ಮಾತ್ರ ನಿಮಗೆ ನಾವು ಸಹಕಾರ ಮಾಡಬಹುದು ಆದರೆ ಅನಾಹುತಕ್ಕೆ ಯಾರು ಸಹಾಯ ಮಾಡಲಾರರು. ಮೇಲಿನ ಎಲ್ಲಾ ಕಾಗದ ಪತ್ರಗಳು ಇದ್ದಲ್ಲಿ ಮಾರಣಹೋಮದಂತಹ ದುರ್ಘಟನೆ ಸಂಭವಿಸಿದಲ್ಲಿ ಸುಮಾರು 15,00,000=00 ರೂ. ವರೆಗೆ ವಿಮೆ ಬರುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ವಾಹನ Driving Licence ಇಲ್ಲದೆ ಯಾರೋಬ್ಬರಿಗೂ ಕೊಡಬೇಡಿ.. ಒಂದು ವೇಳೆ ಕೊಟ್ಟಲ್ಲಿ ಮುಂದಿನ ಅನಾಹುತಗಳಿಗೆ ವಾಹನ ಮಾಲಿಕರೇ ಜವಾಬ್ದಾರರು.  

ನಿಮ್ಮ ವಾಹನಕ್ಕೆ Insurance ಕಟ್ಟದೆ ಇದ್ದಂತಹ ಸಂದರ್ಭದಲ್ಲಿ ಮಾರಣಾಂತಿಕ ಅಪಘಾತ ಸಂಭವಿಸಿದಲ್ಲಿ ವಾಹನ ಮಾಲಿಕರ ಹೆಸರಿನಲ್ಲಿ ಇರುವ ಆಸ್ತಿ ಜಪ್ತಿ ಮಾಡಿ ಬಂದ ಹಣವನ್ನು ಮರಣಹೊಂದಿದ ವ್ಯಕ್ತಿಯ ಅವಲಂಬಿತರಿಗೆ  ಕೊಡಲಾಗುತ್ತದೆ. 👏👏 

   ಇನ್ನೊಂದು ಮಾಹಿತಿ ಇತ್ತೀಚೆಗೆ ಖರೀದಿಸಿದ ದ್ವಿಚಕ್ರ ವಾಹನದಾರರು 5 ವರ್ಷದ Insurance ಇದೆ ಎಂದು  ತಿಳಿದುಕೊಂಡಿದ್ದಾರೆ.

5 ವರ್ಷದ ವರೆಗೆ 3rd Party ಗೆ  ಮಾತ್ರ ಸಂಬಂಧಿಸಿದೆ. ಆದರೆ ದ್ವಿಚಕ್ರ ವಾಹನ ಸವಾರರಿಗೆ ಯಾವುದೇ ರಕ್ಷಣೆ ಇಲ್ಲ. ಆದ್ದರಿಂದ ಒಂದು ವರ್ಷದ ನಂತರ ಪ್ರತಿ ವರ್ಷ ನಿಮ್ಮ ವಾಹನಕ್ಕೆ Insurance ನವೀಕರಿಸಬೇಕು. 

  ಮೇಲಿನ ಮಾಹಿತಿ ಗೊತ್ತಿಲ್ಲದೆ ಇರುವವರು ತಿಳಿದುಕೊಳ್ಳಿ, ಒಬ್ಬರಿಗಾದರೂ ಇದರ ಸದುಪಯೋಗವಾದಲ್ಲಿ ಬರೆದಿದ್ದಕ್ಕೂ ಸ್ವಾರ್ಥಕವಾಗುತ್ತದೆ. 


                     ✍️✍️✍️✍️ M T Biradar

Post a Comment

0 Comments