ಬಹುರಾಷ್ಟ್ರೀಯ ಕಂಪನಿಗಳ ಪೈಕಿ ಪ್ರಮುಖ ಕಂಪನಿ ಎನಿಸಿಕೊಂಡಿರುವ ಐಬಿಎಂ ಭಾರತದಲ್ಲಿ ನೇಮಕಾತಿ ಆರಂಭಿಸಲಿದೆ. ಕಂಪನಿಯು ಹೊಸ ಪದವೀಧರರಿಗೆ ಅವಕಾಶ ನೀಡಲು ಮುಂದಾಗಿದ್ದು, ಆಸಕ್ತರು ಐಬಿಎಂ ನೇಮಕಾತಿ ಬಗ್ಗೆ ತಿಳಿದುಕೊಳ್ಳಬಹುದು. ಭಾರತದಲ್ಲಿರುವ ತನ್ನ ಕಚೇರಿಗಳಲ್ಲಿ ಅಸೋಸಿಯೇಟ್ ಸಿಸ್ಟಮ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳೋದಾಗಿ ಪ್ರಕಟಿಸಿದೆ.
ನೀವು ಡಿಗ್ರಿ ಕೊನೆ ವರ್ಷದ ಹೊಸ್ತಿಲಲ್ಲಿ ಇದ್ದೀರಾ..? ಅದರಲ್ಲೂ ಇಂಜಿನಿಯರಿಂಗ್ ಪದವಿ ಓದುತ್ತಿದ್ದೀರಾ? ಡಿಗ್ರಿ ಪೂರೈಸಿ ಅಕ್ಸೆಂಚರ್, ಇನ್ಫೋಸಿಸ್, ಐಬಿಎಂನಂತಹ ಒಳ್ಳೆಯ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು ಹುಡುಕಾಟ ನಡೆಸ್ತಿದ್ದೀರಾ?.. ಹಾಗಿದ್ರೆ ನಿಮಗೆ ಸೂಟೇಬಲ್ ಆಗುವಂತಹ ಅವಕಾಶವೊಂದು ಇಲ್ಲಿದೆ ನೋಡಿ.
ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾದ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ (IBM), ಹಲವು ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಮೆರಿಕಾ ಮೂಲದ ಈ ಐಬಿಎಂ ಕಂಪನಿಯು, ಭಾರತದಲ್ಲಿರುವ ತನ್ನ ಕಚೇರಿಗಳಲ್ಲಿ ಅಸೋಸಿಯೇಟ್ ಸಿಸ್ಟಮ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳೋದಾಗಿ ಪ್ರಕಟಿಸಿದೆ. ಐಬಿಎಂ ಘೋಷಿಸಿದ ನೇಮಕಾತಿ ಸೂಚನೆಯಲ್ಲಿ ಕಂಪನಿಗೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಹೊಸ ಪದವೀಧರರನ್ನು ನೇಮಿಸಿಕೊಳ್ಳೋದಾಗಿ ತಿಳಿಸಿದೆ. ಹೊಸ ಪದವೀಧರರು, ವಿವಿಧ ವೇದಿಕೆಗಳು ಮತ್ತು ತಂತ್ರಜ್ಞಾನಗಳಲ್ಲಿ ಅಪ್ಲಿಕೇಶನ್‌ಗಳ ವಿನ್ಯಾಸ, ಕೋಡ್‌ಗಳನ್ನು ಬರೆಯುವುದು, ಪರೀಕ್ಷೆ, ಡೀಬಗ್ ಮತ್ತು ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ತಂಡದ ಉದ್ದೇಶಗಳ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ.
ಅಭ್ಯರ್ಥಿಯು ವೈಯಕ್ತಿಕ/ ತಂಡದ ಉದ್ದೇಶಗಳ ಮೇಲೆ ಕೇಂದ್ರೀಕರಿಸಬೇಕು. ಜೊತೆಗೆ ವೃತ್ತಿಪರ ಪರಿಣಾಮಕಾರಿತ್ವದ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಅಂತ IBM ಹೇಳಿದೆ. ಪ್ರೊಗ್ರಾಮಿಂಗ್ (ಜಾವಾ, ಪೈಥಾನ್, ನೋಡ್.ಜೆಎಸ್) & ಸಾಫ್ಟ್‌ವೇರ್ ಡೆವಲಪ್ಮೆಂಟ್ ಲೈಫ್ ಸೈಕಲ್ ಕಾನ್ಸೆಪ್ಟ್ಸ್ ಕೌಶಲ್ಯ ಗಳನ್ನು ತಿಳಿದಿರಬೇಕು
0 Comments