ಹಾಡನ್ನು ಹಾಡುವಾಗ ಆಲಿಸುವ, ಅದೇ ಹಾಡನ್ನು ಓದುವ ಅನುಭವ ಬೇರೆ ಬೇರೆಯಾದುದು. ಈ ಎರಡು ಕ್ರಿಯೆಗಳಲ್ಲಿ ತಲ್ಲೀನವಾದಾಗ ಮನೋಗತವಾಗಬೇಕಾದ ಸಂಗೀತ, ಸಾಹಿತ್ಯದ ಮನೋಭಾವ, ಗುಣಾಂಶಗಳು ಜಾರಿಹೋಗುವುದಿಲ್ಲ. ವಿರಹ, ವಿಷಾದ, ವಿನೋದ, ಆನಂದ ಯಾವುದೇ ಆಗಲಿ ಅನುಭವಿಸುವಾಗಿನ ಸಮಯ ವಿಶೇಷವಾದುದು. ಹೀಗಾಗಿ ಸಾಹಿತ್ಯವನ್ನೊಳಗೊಂಡ ಸಂಗೀತ, ಸಂಗೀತವನ್ನೊಳಗೊಂಡ ಸಾಹಿತ್ಯ ಮನಸ್ಸಿನಲ್ಲಿ ಚಿತ್ರ, ಲೋಕವನ್ನು ಸೃಜಿಸುತ್ತದೆ. ಅದು ಮರೆಯದ, ಮರೆಯಬಾದ್ದಾಗಿ ಉಳಿಯುತ್ತದೆ.
from Oneindia.in - thatsKannada Columns https://ift.tt/yYwdV26
https://ift.tt/7KYiAqD
0 Comments