ಸ್ನೇಹಿತರೇ ನಮಸ್ತೆ.
ದಿನಾಂಕ 01/01/2016ರ ನಂತರ ಇಲಾಖೆಯ ಸೇವೆಗೆ ಸೇರಿರುವ ಅಧ್ಯಾಪಕರುಗಳಿಗೆ ಏಪ್ರಿಲ್ 2019ರಿಂದ ಪಾವತಿಯಾಗ ಬೇಕಿರುವ ವೇತನ ಬಾಕಿಯನ್ನು ಡ್ರಾ ಮಾಡುತ್ತಿರುವ ಆದೇಶದ ಪ್ರತಿ ಇದು.
ಇದರ ಅನ್ವಯ ಅಧ್ಯಾಪಕರುಗಳಿಗೆ ಸಲ್ಲಿಕೆಯಾಗ ಬೇಕಿರುವ ವೇತನ ಬಾಕಿಯು ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರ ಖಾತೆಯ ಮೂಲಕ ನೇರವಾಗಿ RTGS/NEFT ಮೂಲಕ ಅಧ್ಯಾಪಕರುಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿದೆ. 326 ಕಾಲೇಜುಗಳ 1750ಕ್ಕೂ ಅಧಿಕ ಅಧ್ಯಾಪಕರುಗಳಿಗೆ ಈ ವೇತನ ಬಾಕಿಯು ಪಾವತಿಯಾಗುತ್ತಿದೆ ಎಂದು ತಿಳಿಸಲು ಇಚ್ಚಿಸುತ್ತೇವೆ.
ಆದರೆ ಇನ್ನುಳಿದ ಅಧ್ಯಾಪಕರುಗಳಿಗೆ ವೇತನ ಬಾಕಿ ಪಾವತಿಯು ವಿಳಂಬವಾಗಲು
ಇರುವ ವಾಸ್ತವ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.
ನಾವು ಈ ಹಿಂದೆ 2006 ಮತ್ತು 2016ರ ಯುಜಿಸಿ ಹಿಂಬಾಕಿ ಪಡೆಯುವಾಗ,
2006ರ ಯುಜಿಸಿ ಹಿಂಬಾಕಿಯನ್ನು (2006ರ ಪರಿಷ್ಕೃತ ಮೂಲ ವೇತನ + ಡಿಎ )-(1996 ಮೂಲ ವೇತನ+DA @74%constant) ಇವುಗಳ ನಡುವಿನ ವ್ಯತ್ಯಾಸವನ್ನು 2006ರ ಯುಜಿಸಿ ಹಿಂಬಾಕಿ ಅಂತಲೂ,
2016ರ 7ನೇ ಯುಜಿಸಿ ವೇತನ ಹಿಂಬಾಕಿಯನ್ನು ಸಹ (2016ರ ಪರಿಷಕ್ಕೃತ ಮೂಲವೇತವ +ಡಿಎ)-(2006ರ ಪರಿಷ್ಕೃತ ಮೂಲವೇತನ +ಡಿಎ@125%
Constant )ಇದರ ನಡುವಿನ ವ್ಯತ್ಯಾಸದ ಮೊತ್ತವನ್ನು 2016ರ ಯುಜಿಸಿ ಹಿಂಬಾಕಿ ಎಂದು ಪಡೆದಿದ್ದೇವೆ..
ಆದರೆ ಹಣಕಾಸು ಇಲಾಖೆಯು ಈ ಸೂತ್ರವನ್ನು ಒಪ್ಪುತ್ತಿಲ್ಲ.
ಅವರ ಪ್ರಕಾರ ಹಿಂಬಾಕಿಯನ್ನು ಕ್ರಮವಾಗಿ (1996 ಮೂಲವೇತನ +Variable DA)-(2006ರ ಪರಿಷ್ಕೃತ ಮೂಲವೇತನ)ಈ ವ್ಯತ್ಯಾಸದ ಮೊತ್ತವನ್ನು 2006ರ ಹಿಂಬಾಕಿ ಅಂತಲೂ
ಅದೇರೀತಿ 2016ರ ಯುಜಿಸಿ ಹಿಂಬಾಕಿಯನ್ನು
(2006ರ ಮೂಲವೇತನ+DA Variable up to 148%)-(2016ರ ಪರಿಷ್ಕೃತ ಮೂಲವೇತನ )ಇದರ ವ್ಯತ್ಯಾಸವನ್ನು 39 ತಿಂಗಳ 2016 ಯುಜಿಸಿ ಹಿಂಬಾಕಿ ಎಂದು ಲೆಕ್ಕಹಾಕಿ ಹೆಚ್ಚಾಗಿ ಪಾವತಿಸಿದ್ದರೆRecoveryಮಾಡುವಂತೆ ಪದೇ ಪದೇ ಸೂಚಿಸುತ್ತಿದ್ದಾರೆ.
*ಇದೇ ಸೂತ್ರದ ಅನ್ವಯ ರಾಜ್ಯದ ವಿವಿಗಳ* ಅಧ್ಯಾಪಕರುಗಳಿಗೆ ಹಿಂಬಾಕಿ ನೀಡಲಾಗಿದೆ
ಎನ್ನುವುದು ಹಣಕಾಸು ಇಲಾಖೆಯು ನಿಲುವು.
ಆದರೆ Variable DA ಎಂದು ಲೆಕ್ಕ ಹಾಕುವುದಾದರೇ 2ಕಡೆ DAಸೇರಿಸಿ ಲೆಕ್ಕಹಾಕಿ ಎನ್ನುವುದು ಸಂಘದ ನಿಲುವು.ಏಕೆಂದರೆ ಹಣಕಾಸು ಇಲಾಖೆಯ ಸೂತ್ರವನ್ನು ಅನುಸರಿಸಿದರೆ ನಾವು 7ನೇ ವೇತನ ಬಾಕಿಯ ಮೊತದ ಜೊತೆಗೆ ಮತ್ತಷ್ಟನ್ನು ಮರಳಿ ಪಾವತಿಸ ಬೇಕಾಗುತ್ತದೆ.
ಆದ್ದರಿಂದ ಮದ್ಯ ಪ್ರವೇಶಿಸಿ ನ್ಯಾಯ ದೊರಕಿಸುವಂತೆ ಗೌರವಾನ್ವಿತ
ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಕೋರಿದ್ದೇವೆ.
ಅವರು ಶೀಘ್ರದಲ್ಲೇ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದು ನಮ್ಮ ಆಶಯವಾಗಿದೆ.
ಒಂದು ವೇಳೆ ನ್ಯಾಯ ದೊರೆಯದಿದ್ದರೇ ನಿಮ್ಮಗಳ ನೆರವಿನೊಂದಿಗೆ ನ್ಯಾಯಪಡೆಯಲು ಸಂಘವು ಮುಂದಾಗುತ್ತದೆ ಎಂದು ತಿಳಿಸಲಿಚ್ಚಿಸುತ್ತೇವೆ.
ವಂದನೆಗಳೊಂದಿಗೆ.
ಡಾ.ಟಿ.ಎಂ.ಮಂಜುನಾಥ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ಕೆಜಿಸಿಟಿಎ.
0 Comments