ನವದೆಹಲಿ, ಮೇ. 16: ಬ್ರಿಟನ್‌ನ ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ವೊಡಾಫೋನ್ 11,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು ಹೊಸ ಹಣಕಾಸು ವರ್ಷದ ಗಳಿಕೆಯಲ್ಲಿ ಯಾವುದೇ ಬೆಳವಣಿಗೆ ಕಾಣಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಕಂಪನಿ ಮಂಗಳವಾರ ಮಾಹಿತಿ ನೀಡಿದೆ.
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/vodafone-to-cut-11-000-jobs-over-3-years-294412.html
0 Comments