ಪ್ರಥಮ ದರ್ಜೆ ಮಹಿಳಾ ಕಾಲೇಜು ಜಮಖಂಡಿ ಇನ್ಪೋಸಿಸ್ ಫೌಂಡೇಶನ್ ೧೦ ಕಂಪ್ಯೂಟರ್ ವಿತರಣಾ ಸಮಾರಂಭ ಹಮ್ಮಿ ಕೊಳ್ಳಲಾಗಿತ್ತು
ಜಮಖಂಡಿ:- ಇಂದು ದಿನಾಂಕ : ೨೭-೦೩-೨೦೨೧ ರಂದು ಜಮಖಂಡಿಯ ಪ್ರಥಮ ದರ್ಜೆ ಮಹಿಳಾ ಕಾಲೇಜು ಜಮಖಂಡಿಯಲ್ಲಿ ಇನ್ಪೋಸಿಸ್ ಫೌಂಡೇಶನ್ ಬೆಂಗಳೂರು ವತಿಯಿಂದ ೧೦ ಕಂಪ್ಯೂಟರ್ ವಿತರಣಾ ಸಮಾರಂಭ ಹಮ್ಮಿ ಕೊಳ್ಳಲಾಗಿತ್ತು. ಡಾ. ಶ್ರೀಮತಿ ಸುಧಾ ಮೂರ್ತಿ ಅದ್ಯಕ್ಷರು ಇನ್ಪೋಸಿಸ್ ಫೌಂಡೇಶನ್,ಬೆಂಗಳೂರು ಅಮ್ಮನವರ ಆಶಯದಂತೆ ಇಂದು ಪ್ರಥಮ ದರ್ಜೆ ಮಹಿಳಾ ಕಾಲೇಜು ಜಮಖಂಡಿಯಲ್ಲಿ ೧೦ ಕಂಪ್ಯೂಟರ್ ಅನ್ನು ಶಾಸಕರು ಶ್ರೀ ಮಾನ್ಯ ಆನಂದ ಸಿ ನ್ಯಾಮಗೌಡ ಅವರು ವಿತರಣೆ ಮಾಡಿದರು ಮತ್ತು ಈ ಸಮಾರಂಭವನ್ನು ಪ್ರಾಥನೆ ಗೀತೆಯನ್ನು ಪೂಜಾ ಪಣದಿ ಅವರು ಮಾಡಿದರು ಮತ್ತು ಪ್ರೊಫೆಸರ್ ಸುನಿಲ್ ಮಣಕವಾಡ ಅವರು ಪುಷ್ಪ ಕೊಡುವ ಮುಖಾಂತರ ಅತಿಥಿಗಳಿಗೆ ಸ್ವಾಗತಿಸಿದರು ಪ್ರೊಫೆಸರ್ ಎಸ್ ಪಿ ಸಜ್ಜನ ಅವರು ಪ್ರಾಸ್ತಾವಿಕ ಮಾಡಿದರು ಮತ್ತು ಈ ಕಾರ್ಯಕ್ರಮಕ್ಕೆ ಅತಿಥಿ ಗಳು ಶ್ರೀ ಎನ್ ಆರ್ ಕುಲಕರ್ಣಿ ಮತ್ತು ಶ್ರೀ ಶ್ರೀನಿವಾಸ ಅಪರಂಜಿ ವಹಿಸಿಕೊಂಡಿದ್ದರು ಅದ್ಯಕ್ಷತೆಯನ್ನು ಪ್ರೊಫೆಸರ್ ಎಸ್ ಎಮ್ ಹಾದಿಮನಿ ಪ್ರಾಚಾರ್ಯರರು ಪ್ರಥಮ ದರ್ಜೆ ಮಹಿಳಾ ಕಾಲೇಜು ಜಮಖಂಡಿ ಇವರು ವಹಿಸಿಕೊಂಡಿದ್ದರು ಮತ್ತು ವಂದನಾರ್ಪನೆ ಯನ್ನು ಪ್ರೊಫೆಸರ್ ಎಮ್ ಎಮ್ ಮಂಟೂರ ಮಾಡಿದರು ನಿರೂಪಣೆ ಅನ್ನು ಪ್ರೊಫೆಸರ್ ಎನ್ ವ್ಹಿ ಅಸ್ಕಿ ಅವರು ಮಾಡಿದರು. ಈ ಸಮಾರಂಭದಲ್ಲಿ ನಗರಸಭೆ ಅದ್ಯಕ್ಷರು ಸಿದ್ದು ಮೀಶಿ ನಗರಸಭೆ ಸದಸ್ಯರು ದಾನೆಶ ಘಾಟಗೆ ಸುನಿಲ್ ಶಿಂಧೆ ಹಾಗೂ ಗನ್ಯ ವೇಕ್ತಿಗಳು ಮತ್ತು ಎಲ್ಲ ಪ್ರಾದ್ಯಾಪಕರು ಹಾಗು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವರದಿಗಾರರು. ಯಶವಂತ ಕಲೂತಿ ಜಮಖಂಡಿ
via YouTube https://www.youtube.com/watch?v=zJjTkqWLwEU
0 Comments