ಚನ್ನಬಸವಣ್ಣ ಮತ್ತು ನೊಬೆಲ್ ವಿಜೇತ ಬೌತವಿಜ್ಞಾನಿ ಸ್ಟೀವ ವೈನಬೆರ್ಗ (Steven Weinberg) ವಿಶ್ವ ರಚನೆಯ ವಿವರಗಳಲ್ಲಿಯ ಸಾಮ್ಯತೆ.
(ದಿನಾಂಕ July 23, 2021 ರಂದು ತಮ್ಮ 88 ನೇಯ ವಯಸ್ಸಿನಲ್ಲಿ ನಿಧನರಾದ ವಿಜ್ಞಾನಿ
Dr Steven Weinberg ಅವರಿಗೆ ಗೌರವ ಸಲ್ಲಿಸಲು ಈ ಲೇಖನ)
ಜನ್ಮತ: ಜ್ಞಾನಪರಿಮಳಭರಿತ, ಅವಿರಳ ಜ್ಞಾನಿ,ಸ್ವಯಂಭು ಜ್ಞಾನಿ, ಷಟಸ್ಥಲ ಜ್ಞಾನಿ-----ಎಂದು ಶರಣರೆಲ್ಲರಿಂದ ಹೊಗಳಿಗೆ ಪಾತ್ರರಾದ ಚನ್ನಬಸವಣ್ಣನವರು ವಚನ ಸಹಿತ್ಯ ಒದುಗರಿಗೆಲ್ಲ ಚಿರಪರಿಚಿತ. ಅನುಭವ ಮಂಟಪದ ಅಧ್ಯಕ್ಷರಾಗಿ ಶರಣರಿಗೆಲ್ಲ ಮಾರ್ಗದರ್ಶನ ಮಾಡಿದ ಯುವಕ. ಅವರ ಸಾಹಸದ ಪರಿಣಾಮವಾಗಿ ಅನೇಕ ಶರಣರ ಪ್ರಾಣ ರಕ್ಷಣೆಯಾಯಿತು. ವಚನಗಳು ದಟ್ಟಕಾಡೈನ ಮಾರ್ಗದಲ್ಲಿ ವಚನಗಳನ್ನು ಬಸವಕಲ್ಯಾಣದಿಂದ ಉಳವಿಗೆ ಸಾಗಿಸಿ ತಂದ ಅವರ ಸಾಹಸ ಗೀತೆ ಯುವಕರಿಗೆ ಸ್ಪೂರ್ಥಿ.
ಅವರು ರಚಿಸಿದ 1500 ಕ್ಕೂ ಹೆಚ್ಚು ವಚನಗಳು ಈಗ ಲಭ್ಯ. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತ ಪ್ರಕ್ರಿಯೆಗಳ ವಿವರಣೆ ಆ ವಚನಗಳಲ್ಲಿವೆ ಎನ್ನುವದು ಸರ್ವವಿದಿತ. ಆದರೆ ಅವರೊಬ್ಬ ಮಹಾನ್ ವಿಜ್ಞಾನಿ. ಅವರ ವಚನಗಳು ವೈಜ್ಞಾನಿಕ ಸೂತ್ರಗಳು ಎನ್ನುವದು ನನ್ನ ಅಭಿಪ್ರಾಯ.
ಚನ್ನಬಸವಣ್ಣನವರ ವಚನದ ಕೆಲವು ಸಾಲುಗಳ ವಿವರಣೆ Dr Steven Weinberg ಅವರು ಪ್ರಕಟಿಸಿದ
The First Three Minutes: A Modern View of the Origin of the Universe (1977, updated with new afterword in 1993, ISBN 0-465-02437-8) ಪುಸ್ತಕದಲ್ಲಿದೆ ಎನ್ನುವದು ನನ್ನ ಅಭಿಪ್ರಾಯವನ್ನು ಸಮರ್ಥಿಸುತ್ತದೆ.
ಚನ್ನಬಸವಣ್ಣನವರ ವಚನ ಭಾಗ:
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಬಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ,
ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ-
ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ.
ಪ್ರಥಮ ಯುಗದಲ್ಲಿ
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ.
ಅಂದು ನಿಮ್ಮ ನಾಬಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು.
ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು.
ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು.
ಇಪ್ಪತ್ತನೆಯ ಯುಗದಲ್ಲಿ
ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ
ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು.
ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು
ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ
ನಮ್ಮ ಬಸವಣ್ಣ. -----------/269
(226 ಶಬ್ದಗಳನ್ನು ಒಳಗೊಂಡ ಚನ್ನವಸವಣ್ಣನವರ ವಚನವನ್ನು ಪೂರ್ಣವಾಗಿ ನೋಡಲು
https://lingayatreligion.com/K/Vachanagalu/ChennaBasavannaVachana.htm ಉಪಯೊಗಿಸಿ)
Dr Steven Weinberg: (ಮೇ 3, 1933 - ಜುಲೈ 23, 2021) ಅಮೇರಿಕ ದೇಶದ ನ್ಯೂಯಾರ್ಕ ದಲ್ಲಿ ಹುಟ್ಟಿದ ಇವರು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದರು.
1979 ರಲ್ಲಿ ಭೌತವಿಜ್ಞಾನದಲ್ಲಿ Abdus Salam ಮತ್ತು Sheldon Glashow ಅವರ ಜೊತೆಗೂಡಿ “unification of the weak force and electromagnetic interaction between elementary particles”ಎಂಬ ವಿಷಯದ ಮೇಲೆ ನೊಬೆಲ್ ಪ್ರಶಸ್ತಿ ಪಡೆದ ಅಮೇರಿಕ ದೇಶದ ವಿಜ್ಞಾನಿ.
ಅವರು ಪ್ರಕಟಿಸಿದ ಕೆಲವು ಪುಸ್ತಕಗಳು ತುಂಬಾ ಜನಪ್ರೀಯವಾಗಿವೆ.
ಇವರ ಪುಸ್ತಕದಲ್ಲಿರುವ ಇರುವ ವಿವರನೆಗಳಿಗೂ 12 ನೆ ಶತಮಾನದಲ್ಲಿ ಬರೆದ ಚನ್ನಬಸವಣ್ಣನವರ ವಚನಭಾಗದಲ್ಲಿ ಬರುವ ಕೆಲವು ಸಾಲುಗಳಲ್ಲಿ ಬರುವ ವಿವರಣೆಗಳಿಗೂ ಇರುವ ಸಾಮ್ಯತೆಯ ವಿವರಣೆ ಸಂಕ್ಷಿಪ್ತವಾಗಿ ಇಲ್ಲಿ ವಿವರಿಸುತ್ತಿರುವೆ.
ಅವರು ಪ್ರಕಟಿಸಿದ ಕೆಲವು ಪುಸ್ತಕಗಳು ತುಂಬಾ ಜನಪ್ರೀಯವಾಗಿವೆ. ಇವರ ಪುಸ್ತಕದಲ್ಲಿರುವ ಇರುವ ವಿವರನೆಗಳಿಗೂ 12 ನೆ ಶತಮಾನದಲ್ಲಿ ಬರೆದ ಚನ್ನಬಸವಣ್ಣನವರ ವಚನಭಾಗದಲ್ಲಿ ಬರುವ ಕೆಲವು ಸಾಲುಗಳಲ್ಲಿ ಬರುವ ವಿವರಣೆಗಳಿಗೂ ಇರುವ ಸಾಮ್ಯತೆಯ ವಿವರಣೆ ಇಲ್ಲಿದೆ.
Dr Steven Weinberg ಅವರೇ ಹೇಳುವಂತೆ
“The present book is concerned with the early universe, and in particular with the new understanding of the early universe that has grown out of the discovery of the cosmic microwave radiation background in 1965”
ಈ ಪುಸ್ತಕದಲ್ಲಿ ಸಾಮಾನ್ಯನಿಗೂ ಅರ್ಥವಾಗುವ ಹಾಗೆ 1993 ರ ವರೆಗೆ ವಿಶ್ವದ ರಚನೆಯ ವೈಜ್ಞಾನಿಕ ವಿವರಗಳನ್ನು ಕೊಟ್ಟಿದ್ದಾರೆ. ಅವರು ಪ್ರಾರಂಭದಲ್ಲಿ ವಿಶ್ವ ರಚನೆಯ ಇತಿಹಾಸ ಅರಸುತ್ತ ಹೋಗುತ್ತಾರೆ. ಅವರು ವಿವರಣೆ ಪ್ರಾರಂಭ ಮಾಡುವದು 13 ನೇಯ ಶತಮಾನದ ಕೃತಿ EDDA ದಲ್ಲಿ ಬರುವ ಪುರಾತನ ವಿವರಣೆಗಳ ಆಧಾರಗಳಿಂದ.
ಅವರ ಪುಸ್ತಕದ ಮೊದಲ ಭಾಗ Introduction: the Gaint and the cow ದಲ್ಲಿರುವ ವಿವರಣೆಗಳನ್ನು ಮೊದಲು ಗಮನಿಸೊಣ.
1. ಚನ್ನಬಸವಣ್ಣ ಮತ್ತು ಎಡ್ಡಾ (Edda ) ದಲ್ಲಿಯ ವೈಜ್ಞಾನಿಕ ವಿವರಗಳು.
13 ನೇಯ ಶತಮಾನದಲ್ಲಿ Iceland ನಲ್ಲಿ ರಚನೆಯಾದ ಪೌರಾಣಿಕ ಪುರಾತನ ಗ್ರಂಥಗಳಿವು. Younger Edda ಗದ್ಯರೂಪದಲ್ಲಿದ್ದು ಇದು Snori Stulusion ಎಂಬ ಇತಿಹಾಸಕಾರ ಕವಿಯಿಂದ 1220 CE ದಲ್ಲಿ ಸಂಗ್ರಹಿತವಾಗಿದೆ. ಇನ್ನು Elder Edda ಕಾವ್ಯವಾಗಿದ್ದು ಇದು 1270 CE ರಲ್ಲಿ ರಚಿತವಾದ ಅನಾಮಿಕ ಕವಿಯ ಕೃತಿ.
ಈ ಪೌರಾಣಿಕ ಪುಸ್ತಕದಲ್ಲಿ ಬರುವ ಒಂದು ಕಥೆ “ರಾಕ್ಷಸ ಮತ್ತು ಆಕಳು” ” The Giant and the Cow” ಯನ್ನು Steven Weinberg ಅವರು ಹೇಳಿದ ಕಥೆಯ ಸಾರಾಂಶ
“In the beginning, says the Edda, there was nothing at all. 'Earth was not found, nor Heaven above, a Yawning-gap there was, but grass nowhere.' To the north and south of nothing lay regions of frost and fire, Niflheim and Muspelheim. The heat from Muspelheim melted some of the frost from Niflheim, and from the liquid drops there grew a giant, Ymer. What did Ymer eat? It seems there was also a cow, Audhumla. And what did she eat? Well, there was also some salt. And so on.”
ಮೊದಲು ಏನೇನು ಇರಲಿಲ್ಲ, ಕೆಳಗೆ ಭೂಮಿಯೂ ಇರಲಿಲ್ಲ, ಮೇಲೆ ಸ್ವರ್ಗವೂ ಇರಲಿಲ್ಲ. ಅಲ್ಲಿ ಇದ್ದದ್ದು ಬರಿ ಖಾಲಿ, ಹುಲ್ಲೂ ಇರಲಿಲ್ಲ. ಉತ್ತರ ಭಾಗ Niflheim ಮಂಜಿನಿಂದ ಮತ್ತು ದಕ್ಶಿಣದ ಭಾಗ Muspelheim ಬೆಂಕಿಯಿಂದ ಆವೃತವಾಗಿತ್ತು. ಆ Muspelheim ಬೆಂಕಿಯಿಂದ Niflheim ದ ಮಂಜು ಕರಗಿ ಕೆಲವು ದ್ರವದ ಹನಿಗಳಾದವು. ಆ ಹನಿಗಳಿಂದ Ymer ತಿಂದಿತು? ಅಲ್ಲಿ ಸ್ವಲ್ಪ ಉಪ್ಪಿತ್ತು ಎಂದು ಭಾವಿಸಲಾಗಿತ್ತು.... ಇದು ಕಥೆಯ ತಿರುಳು.
ಈ ವಿವರಣೆಯನ್ನು ಓದಿದಾಗ ಚನ್ನಬಸವಣ್ಣನವರ ವಚನ ಭಾಗ
ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು
ಆರೂ ಆರೂ ಇಲ್ಲದಂದು, ನಾಮವಿಲ್ಲದಂದು,
ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ.
ನೆನಪಾಗುವದು ಸಹಜ ಅಲ್ಲವೇ.
ಚನ್ನಬಸವಣ್ಣನವರು ಹೇಳಿದ ವಿವರವೇ Edda ಹೇಳಿದ ವಿವರದಲ್ಲಿದೆ. ಚನ್ನಬಸವಣ್ಣನವರು ವಚನ ರಚಿಸಿದ್ದು 12 ನೇಯ ಶತಮಾನದಲ್ಲಿ. ಇಲ್ಲಿಂದ ಈ ವಿವರಗಳು ಒಂದು ಶತಮಾನದಲ್ಲಿ ಕಥಾ ರೂಪದಲ್ಲಿ ಯುರೋಪ ದೇಶಗಳಿಗೆ ತಲುಪಿರುವ ಸಾಧ್ಯತೆ ಇದೆ.
ವಚನಗಳು ತಾತ್ವಿಕ ಧಾರ್ಮಿಕ ವಿಚಾರಗಳು. ನಾನು ಶರಣರ ಅಭಿಮಾನದಿಂದ ವಿಶ್ವದ ರಚನೆ ವಿವರಿಸಲು ಬರೆದವುಗಳು ಎಂದು ಬಿಂಬಿಸುತ್ತಿರುವೆ ಎಂದು ನಿಮಗೆ ಅನಿಸುತ್ತದೆಯೇ? ಇಲ್ಲ ಎನ್ನುವದು
ಶರಣ ಕಾಡಸಿದ್ಧೇಶ್ವರ ಶರಣರ ಈ ವಚನ ಓದಿದರೆ ಗೊತ್ತಾಗುತ್ತದೆ.
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ.
ಈ ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ,
ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು.
ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.-------------,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. / 316
2. ಚನ್ನಬಸವಣ್ಣನವರ “ಲಿಂಗ” ಮತ್ತು ವಿಜ್ಞಾನಿಗಳ “Singularity” ಸಮಾನ ಪದಗಳು.
ಘನಲಿಂಗ (Singularity):
ಮೊದಲಿಗೆ ಕೆಲವು ವಚನ ಗಮನಿಸೋಣ
1. ನೀವು ನಿಮ್ಮ ಸ್ವಲೀಲೆಯಿಂದೆ ಜಗದಲೀಲಾ ವೈಭವಂಗಳ ನಟಿಸಬೇಕೆಂದು ನಿಮ್ಮಲ್ಲಿ ನೆನಹುದೋರಲು,ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
---------------------/ ಷಣ್ಮುಖಸ್ವಾಮಿ
2. ಆದಿ ಅನಾದಿಯಿಲ್ಲದಂದು ತಾನೆ ಪ್ರಣವಸ್ವರೂಪನು.
ಅನಂತ ಬ್ರಹ್ಮಾಂಡವಿಲ್ಲದಂದು ತಾನೆ ನಾದಬಿಂದುಕಲಾತೀತನು.
ಜೀವಪರಮರಿಲ್ಲದಂದು ತಾನೆ ನಾಮ ಸ್ವರೂಪ ಕ್ರಿಯಾತೀತನು.
ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು ತಾನೆ ಅಖಂಡಪರಿಪೂರ್ಣ
ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ
ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ. / 380
--- ಬಾಲಸಂಗಯ್ಯ ಅಪ್ರಮಾನದೇವ.
ಇವರ ಈ ವಚನ “single, minute point, or singularity” ಎನ್ನುವ ಪದವನ್ನು ಕಾವ್ಯಾತ್ಮಕವಾಗಿ ವಿವರಿಸುತ್ತದೆ. ಅಲ್ಲದೆ ಅದರ ವಿವರಣೆ
“ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು” ಅಥವಾ “ಅಖಂಡಪರಿಪೂರ್ಣ ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ ಮಹಾಘನಲಿಂಗ” ಎನ್ನುವದನ್ನು ಭಾಷಾಂತರ ಮಾಡುವದು ಅಸಾದ್ಯ ಆದರೂ
“All the matter in the Universe emerged from a single, minute point, or singularity” ಎಂದು ವಿವರಿಸಬಹುದಲ್ಲವೇ?
ವಚನದಲ್ಲಿಯ ವಿವರಣೆ ವಿಜ್ಞಾನಿಗಳ ವಿವರಣೆಗಿಂತ ಹೆಚ್ಚು ಪ್ರಭುದ್ಧವಾಗಿದೆ.
ಚನ್ನಬಸವಣ್ಣನವರು ಅಂದಿನಿಂದ ಇಂದಿನವರೆಗೆಗಿನ ವಿಶ್ವ ವಿಕಾಸವನ್ನು
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಬಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ,
ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ-
ಎನ್ನುವ ಇಪ್ಪತ್ತೊಂದು ಯುಗಗಳನ್ನಾಗಿ ವಿಭಾಗಿಸಿ ಅಧ್ಯಯನ ಮಾಡಿದ್ದಾರೆ.
Steven Weinberg ಅವರು ವಿಶ್ವವಿಕಾಸ ಮೊದಲ 3 ನಿಮಿಷ 46 ಸೆಕೆಂಡ ಅವಧಿಯನ್ನು 6 Frame ಗಳಲ್ಲಿ ವಿಭಾಗಿಸಿ ಅಧ್ಯಯನ ಮಾಡಿದ್ದಾರೆ.
ವಿಶ್ವದ ತಾಪಮಾನ ಸಮಯ
Ist Frame 1,00,000 millian degrees Kelvin (10^11K)
2nd Frame 30,000 millian degrees Kelvin (3X10^10K) 0.11 seconds
3rd Frame 10,000 millian degrees Kelvin (10^10K) 1.09 seconds
4th Frame 3,000 millian degrees Kelvin (3X10^9K) 13.82 seconds
5th Frame 1,000 millian degrees Kelvin (10^9K) 3 minutes
A little later 900 millian degrees Kelvin (0.9X10^9K)
ಬೌತವಿಜ್ಞಾನಿ Steven Weinberg ಅವರು ವಿಶ್ವ ವಿಕಾಸ ಪ್ರಾರಂಭವಾದ ನಂತರದ 0.11 ಸೆಕೆಂಡದಲ್ಲಾದ ವಿಕಾಸವನ್ನು Ist Frame (ಪ್ರಥಮ ಕ್ಷಣ) ಸಕ್ಷಿಪ್ತ ವಿವರಣೆ ಇಲ್ಲಿದೆ
Ist Frame:
These are the electron and its antiparticle, the positron and of course the massless particles, the photon, neutrions ana antineutrinos.
The universe is so dense that even the neutrinos, which can travel for years through lead bricks without being scattered, are kept in thermal equilibrium with the electrons, positrons and photons by rapid collisions with them and with each other. If mount Everest were made of matter this dense, its gravitational attraction would destroy the earth. The universe at the first frame rapidly expanding and cooling.
Big bang ತತ್ವ ವಿವರಿಸುವ ವಿಜ್ಞಾನಿಗಳು epoch ಶಬ್ದ “ಯುಗ” ಶಬ್ದಕ್ಕೆ ಪರ್ಯಾಯವಾಗಿ ಉಪಯೋಗಿಸಿದ್ದಾರೆ.
An epoch is a moment in time from which nature or situations change to such a degree that it marks the beginning of a new era or age.
The timeline of cosmological epochs outlines the formation and subsequent evolution of the Universe from the Big Bang (13.799 ± 0.021 billion years ago) to the present day.
ವಿಜ್ಞಾನಿಗಳ ವಿವರಣೆ ಮತ್ತು ವಚನಗಳಲ್ಲಿರುವ ಸಾಮ್ಯತೆಗಳನ್ನು ಅರಿಯೋಣ
ವಿಜ್ಞಾನಿಗಳ ಅಭಿಮತ:
1. The singularity, a point smaller than an atom, is thought of by many scientists as having infinite density and mass.
2. At the moment of the Big Bang, it rapidly expanded, creating all the
space, time, matter, and energy of our physical universe.
3. The initial singularity is a singularity predicted by some models of the Big Bang theory to have existed before the Big Bang and thought to have contained all the energy and spacetime of the Universe.
4. Alternative theoretical formulations for the beginning of the Universe have been proposed, including a string theory-based model
in which two branes, enormous membranes much larger than the Universe, collided, creating mass and energy.
5. Although there is no direct evidence for a singularity of infinite density,
the cosmic microwave background is evidence that the universe expanded from a very hot, dense state.
6. Various new models of what preceded and caused the Big Bang have been proposed as a result of the problems created by quantum mechanics. One model, using loop quantum gravity, aims to explain the beginnings of the Universe through a series of Big Bounces, in which quantum fluctuations cause the Universe to expand.
7. This procreation also predicts a cyclic model of universes, with a new universe being created after an old one is destroyed, each with different physical constants.
8. Another procreation based on M-theory and observations of the cosmic microwave background (CMB), states that the Universe is but one of many in a multiverse, and has budded off from another universe as a result of quantum fluctuations, as opposed to our Universe being all that exists.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ “ಅಖಂಡಪರಿಪೂರ್ಣ ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ ಮಹಾಘನಲಿಂಗ” ಎನ್ನುವ ವಚನಭಾಗ ವಿವರಿಸುತ್ತದೆ ಎನ್ನುವದು ಗಮನಾರ್ಹ.
ವಿಜ್ಞಾನಿಗಳು ಪ್ರಸ್ತುತಪಡಿಸಿದ ಎಲ್ಲ ವಿವರಗಳನ್ನು ಶರಣರ ವಚನಭಾಗಗಳು ಒಳಗೊಂಡಿವೆ. ಉದಾಹರಣೆಗೆ
1. ಕಾಡಸಿದ್ಧೇಶ್ವರ ವಚನಭಾಗ:
ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು------
2. ಷಣ್ಮುಖಸ್ವಾಮಿ ವಚನಭಾಗ:
ಅ. ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ
ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ---
ಆ. ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ ಮಹಾಘನಲಿಂಗ-- ---
3. ದೇಶಿಕೇಂದ್ರ ಸಂಗನಬಸವಯ್ಯ ವಚನಭಾಗ:
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಯುದಯವಾಗಿ,
ಆ ಮೂಲ ಚಿತ್ತುಗೂಡಿ, ಗಟ್ಟಿಗೊಂಡು
ಗೋಲಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
4. ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಭಾಗ:
ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ ---
5. ಘನ ಲಿಂಗದೇವ ವಚನಭಾಗ:
ನಿಷ್ಕಳ ಪರಂಜೋತಿ ತಾನೊಂದೆ ನೋಡಾ. ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ ಮಹಾಲಿಂಗವೆನಿಸಿತು.
3. ಚನ್ನಬಸವಣ್ಣನವರ “ಜಲಪ್ರಳಯ” ಸಿದ್ಧಾಂತ ಮತ್ತು ವಿಜ್ಞಾನಿಗಳ ಸಂಶೋಧನೆಗಳು.
ಚನ್ನಬಸವಣ್ಣನವರ ವಚನಭಾಗದಲ್ಲಿ ಬರುವ ಜಲಪ್ರಳಯ
ಅಂದು ನಿಮ್ಮ ನಾಬಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು.
ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು.
ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು.
ಇಪ್ಪತ್ತನೆಯ ಯುಗದಲ್ಲಿ
ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ
ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು.
ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು
ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ
ನಮ್ಮ ಬಸವಣ್ಣ.
ದ ವಿವರವನ್ನು ಪೌರಾಣಿಕ ಪುಸ್ತಕ Edda ಬರುವ ಒಂದು ಕಥೆ “ರಾಕ್ಷಸ ಮತ್ತು ಆಕಳು” ” The Giant and the Cow” ಯಲ್ಲಿ Steven Weinberg ಅವರು ಪ್ರಸ್ಥಾಪಿಸಿದ್ದಾರೆ.
“In the beginning, says the Edda, there was nothing at all. 'Earth was not found, nor Heaven above, a Yawning-gap there was, but grass nowhere.' To the north and south of nothing lay regions of frost and fire, Niflheim and Muspelheim.
The heat from Muspelheim melted some of the frost from Niflheim, and from the liquid drops there grew a giant, Ymer. What did Ymer eat? It seems there was also a cow, Audhumla. And what did she eat? Well, there was also some salt. And so on.”
ಇಲ್ಲಿ ಗಮನಿಸಬೆಕಾದ ಅಂಶ ಚನ್ನಬಸವಣ್ಣವನವರು “ ಜಲಪ್ರಳಯ” ಮತ್ತು “ಭಸ್ಮ” ಪದಪ್ರಯೋಗ ಮಾಡಿದ್ದರೆ Steven Weinberg ಅವರು “liquid drops” ಮತ್ತು “some salt “ ಎನ್ನುವ ಪದಪ್ರಯೊಗ ಮಾಡಿದ್ದಾರೆ. ಈ ವಿವರಗಳನ್ನೆಲ್ಲ ವಿಜ್ಞಾನಿಗಳು CERN ದ ಪ್ರಯೋಗಾಲಯದಲ್ಲಿಯ “Large Hedron Gollider” “ಜಲಪ್ರಳಯ” ಈ ತತ್ವವನ್ನು ಸಿದ್ಧಮಾಡಲು ವಿಜ್ಞಾನಿಗಳು ಪರಿಶ್ರಮವಹಿಸಿ ಅನೇಕಾನೇಕ ಪ್ರಬಂಧಗಳನ್ನು ಬರೆದಿದ್ದಾರೆ.
ವಿಶ್ವದಲ್ಲಿರುವ ದ್ರವ್ಯ ಸಾಮಾನ್ಯವಾಗಿ ಘನ, ದ್ರವ ಮತ್ತು ವಾಯು ಆಕಾರದಲ್ಲಿ ಇರಬಹುದು ಎನ್ನುವದು ನಮಗೆ ಗೊತ್ತು. ನೀರನ್ನು ಭರ್ಪ (ಘನರೂಪದಲ್ಲಿ), ನೀರು (ದ್ರವ ರೂಪದಲ್ಲಿ) ಮತ್ತು ಹಬೆ (ವಾಯು ರೂಪದಲ್ಲಿ) ಕಾಣಬಹುದು. ತಾಪಮಾನ ಹೆಚ್ಚಾದಾಗ ಭರ್ಪ ನೀರಾಗುತ್ತದೆ ಇನ್ನಷ್ಟು ತಾಪಮಾನ ಹೆಚ್ಚಾದಾಗ ನೀರು ಆವಿಯಾಗಿ ಪರಿವರ್ತನೆ ಆಗುತ್ತದೆ. ಇನ್ನೂ ತಾಪಮಾನ ಹೆಚ್ಚಾದಾಗ ಆವಿ ಪ್ಲಾಸ್ಮಾ ಆಗುತ್ತದೆ.
ಮಾನವ ನಿರ್ಮಿತ ಅತೀ ಹೆಚ್ಚಿನ ತಾಪಮಾನ Large Hadron Collider (LHC) at CERN around
5.5 trillion Kelvin(5500000000000K). ಮಹಾಸ್ಪೋಟವಾಗುವ ಕಾಲದಲ್ಲಿ ತಾಪಮಾನ 10^32K
(10000000 ----000 32 ಸೊನ್ನೆಗಳು) ಇರಬಹುದು ಎಂದು ಅಂದಾಜಿಸಲಾಗಿದೆ.
(At the end of the initial Big Bang event, the temperature of the universe is approximately T=10^32K).
ಈ ತಾಪಮಾನದಲ್ಲಿ ಪ್ಲಾಸ್ಮಾ “ಜಲ”ವಾಗುತ್ತದೆ ಎನ್ನುವದನ್ನು ಚನ್ನಬಸವಣ್ಣನವರು ತಮ್ಮ ವಚನದಲ್ಲಿ ವಿವರಿಸಿದ್ದಾರೆ. ವಿಜ್ಞಾನಿಗಳು “Quark- gluon plasma” ಎನ್ನುವ ದ್ರವ (hot, dense soup) ಆಗುತ್ತದೆ ಎಂದು ವಿವರಿಸಿದ್ದಾರೆ.
Quark–gluon plasma or QGP is an interacting localized assembly of quarks and gluons at thermal (local kinetic) and (close to) chemical (abundance) equilibrium. The word plasma signals that free color charges are allowed. Quark–gluon plasma filled the entire Universe before matter was created. Quark–gluon plasma was detected for the first time in the laboratory at CERN in the year 2000. In this state, matter behaves as a nearly inviscid fluid.
CERN physicists collide heavy ions to free quarks - recreating conditions that existed in the universe just after the Big Bang
For a few millionths of a second, shortly after the Big Bang, the universe was filled with an astonishingly hot, dense soup made of all kinds of particles moving at near light speed.
ಚನ್ನಬಸವಣ್ಣವರ ವಚನವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುವ ಕೆಲವು ಪ್ರಭಂಧಗಳು.
1. J.-E. Alam, S. Sarkar, P. Roy, T. Hatsuda, and B. Sinha,
“Thermal photons and lepton pairs from quark gluon plasma and hot hadronic matter,” Annals of Physics, vol. 286, no. 2, pp. 159–248, 2000.
2. Cosmological Models with Strange Quark Matter Attached to String Cloud in Self-creation Theory V. U. M. Rao* and D. Neelima Department of Applied Mathematics, Andhra University, Visakhapatnam, India
3. M. Gyulassy, P. Levai, and I. Vitev, “Jet quenching in thin quark-gluon plasmas I: formalism,” Nuclear Physics B, vol. 571, pp. 197–233, 2000.
ಘನಲಿಂಗದೇವ ವಚನ:
ಪಿಂಡಬ್ರಹ್ಮಾಂಡಗಳಿಲ್ಲದಂದು, ಅಷ್ಟದಿಕ್ಪಾಲಕರ ಹುಟ್ಟಿಲ್ಲದಂದು ನಿಷ್ಕಳ ಪರಂಜೋತಿ ತಾನೊಂದೆ ನೋಡಾ.
ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ ಮಹಾಲಿಂಗವೆನಿಸಿತು.
ಆ ಮಹಾಲಿಂಗವೇ ತನ್ನ ಪರಮಾನಂದದಿಂದ ಪ್ರಸಾದಲಿಂಗವೆಂದು ಜಂಗಮಲಿಂಗವೆಂದು ಶಿವಲಿಂಗವೆಂದು
ಗುರುಲಿಂಗವೆಂದು ಆಚಾರಲಿಂಗವೆಂದು ಹೀಂಗೆ ಪಂಚಲಿಂಗವೆನಿಸಿತು.
-------------
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ. / 44
ಮಹಾಸ್ಪೋಟ ಆದ ಘಟನೆಯ ನಂತರದಿಂದ ಇಂದಿನ ವಿಶ್ವ ರಚನೆಯಾಗುವರೆಗೆ ನಡೆದ ವಿವಿಧ ಹಂತಗಳನ್ನು ಘನಲಿಂಗದೇವ ತಮ್ಮ ವಚನದಲ್ಲಿ ವಿವರಿಸಿದ್ದಾರೆ.
ಅವರು ಮಹಾಲಿಂಗ ಐದು ಹಂತಗಳಲ್ಲಿ ವಿಕಾಸವಾಯಿತು ಎಂದು ವಿವರಿಸಿದ್ದಾರೆ.
ಅವರು ವಿವರಿಸಿದ ಪಂಚಲಿಂಗ ಹಂತಗಳು
(1) ಪ್ರಸಾದಲಿಂಗ
(2) ಜಂಗಮಲಿಂಗ
(3) ಶಿವಲಿಂಗ
(4) ಗುರುಲಿಂಗ
(5) ಆಚಾರಲಿಂಗವೆಂದು
ವಿಜ್ಞಾನಿಗಳು ಈ ದಿಶೆಯಲ್ಲಿ ಸಂಶೋಧನೆ ಮಾಡಬೇಕಾಗಿದೆ. ಉಳಿದ ಭಾಗದ ವಿವರ ಒದಗಿಸುವ ವಿಜ್ಞಾನಿಗಳ ಸಂಶೋಧನಾ ಲೇಖನಗಳಿಗಾಗಿ ದಾರಿಕಾಯುವದೊಂದೇ ನಮಗಿರುವ ಮಾರ್ಗ. ಚನ್ನಬಸವಣ್ಣನವರ ವಚನಗಳ ಪರಿಚಯವಿಲ್ಲದಿದ್ದರೂ ಅವರ ವಚನದ ಕೆಲಭಾಗದ ವಿವರಣೆಯನ್ನು ತಮ್ಮ ಪುಸ್ತಕದಲ್ಲಿ ಒದಗಿಸಿದ Dr Steven Weinberg ನನ್ನ ಮತ್ತುನಿಮ್ಮೆಲ್ಲರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುವೆ.
Written by
Gurulingappa Sajjan


0 Comments